Red Hat Enterprise Linux 7 ಅನ್ನು ಪರಿಚಯಿಸಲಾಗುತ್ತಿದೆ

Red Hat Enterprise Linux 7 ಒಂದು ಎಂಟರ್ಪ್ರೈಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ಇತ್ತೀಚಿನ ಸವಲತ್ತುಗಳನ್ನು ಹೊಂದಿರುತ್ತದೆ

  • ಎಂಟರ್ಪ್ರೈಸ್ ಆರ್ಕಿಟೆಕ್ಟ್‌ಗಳು ಹಗುರತೂಕದ ಅನ್ವಯ ಪ್ರತ್ಯೇಕಗೊಳಿಕೆಯನ್ನು (ಐಸೊಲೇಶನ್) ಮೆಚ್ಚುತ್ತಾರೆ.
  • ಅನ್ವಯ ವಿಕಸನೆಗಾರರು ಅಪ್‌ಡೇಟ್ ಮಾಡಲಾದ ವಿಕಸನಾ ಪರಿಸರ ಮತ್ತು ಅನ್ವಯ-ಪ್ರೊಫೈಲ್ ಮಾಡುವ ಉಪಕರಣಗಳನ್ನು ಸ್ವಾಗತಿಸುತ್ತಾರೆ. ಹೆಚ್ಚಿನ ಮಾಹಿತಿಯನ್ನು Red Hat ಡೆವಲಪರ್ ಬ್ಲಾಗ್‌ನಲ್ಲಿ ನೋಡಿ.
  • ಗಣಕ ವ್ಯವಸ್ಥಾಪಕರು ಸುಧಾರಿತ ಕಾರ್ಯನಿರ್ವಹಣೆ ಮತ್ತು ಸ್ಕೇಲೆಬಿಲಿಟಿಯನ್ನು ಹೊಂದಿರುವ ಹೊಸ ವ್ಯವಸ್ಥಾಪನಾ ಉಪಕರಣಗಳು ಮತ್ತು ವಿಸ್ತರಿಸಲಾದ ಕಡತ-ವ್ಯವಸ್ಥೆ ಆಯ್ಕೆಗಳನ್ನು ಮೆಚ್ಚುತ್ತಾರೆ.

ಭೌತಿಕ ಯಂತ್ರಾಂಶದಲ್ಲಿ, ವರ್ಚುವಲ್ ಗಣಕಗಳಲ್ಲಿ, ಅಥವ ಕ್ಲೌಡ್‌ನಲ್ಲಿ ನಿಯೋಜಿಸಲಾದ Red Hat Enterprise Linux 7 ಮುಂದಿನ-ಪೀಳಿಗೆಯ ಆರ್ಕಿಟೆಕ್ಚರುಗಳಿಗೆ ಅಗತ್ಯವಿರುವ ಆಧುನಿಕ ಸವಲತ್ತುಗಳನ್ನು ಒದಗಿಸುತ್ತದೆ.

ಹೆಚ್ಚಿನ ಮಾಹಿತಿಗೆ ಎಲ್ಲಿಗೆ ಹೋಗಬೇಕು:

  • Red Hat Enterprise Linux 7 ಉತ್ಪನ್ನದ ಪುಟ

    Red Hat Enterprise Linux 7 ಕುರಿತು ಮಾಹಿತಿಯ ಪುಟ. ನಿಮ್ಮ Red Hat Enterprise Linux 7 ವ್ಯವಸ್ಥೆಯನ್ನು ಹೇಗೆ ಪೂರ್ವಸಿದ್ಧತೆಗೊಳಿಸುವ, ವ್ಯವಸ್ಥೆಗೊಳಿಸುವ, ನೋಡಿಕೊಳ್ಳುವ ಮತ್ತು ದೋಷ ಪರಿಹರಿಸುವ ಮಾಹಿತಿಯನ್ನು ತಿಳಿದುಕೊಳ್ಳಿ.

  • Red Hat ಕಸ್ಟಮರ್ ಪೋರ್ಟಲ್

    ಲೇಖನಗಳು, ವೀಡಿಯೊಗಳು, ಮತ್ತು ಇತರೆ Red Hat ಕಂಟೆಂಟ್‌ ಅನ್ನು ನಿಮಗಾಗಿಯೆ ಇರಿಸಲಾದ, ಜೊತೆಗೆ ನಿಮ್ಮ Red Hat ಬೆಂಬಲದ ಸನ್ನಿವೇಶವನ್ನು ವ್ಯವಸ್ಥಾಪಿಸಬಹುದಾದ ಕೇಂದ್ರ ಸ್ಥಳ .

  • ಡಾಕ್ಯುಮೆಂಟೇಶನ್

    Red Hat Enterprise Linux ಮತ್ತು ಇತರೆ Red Hat ನೀಡಿಕೆಗಳಿಗೆ ಸಂಬಂಧಿಸಿದ ಡಾಕ್ಯುಮೆಂಟೇಶನ್‌ಗಳನ್ನು ಒದಗಿಸುತ್ತದೆ.

  • Red Hat Subscription Management

    ವ್ಯವಸ್ಥೆಯನ್ನು ದಕ್ಷತೆಯಿಂದ ನೋಡಿಕೊಳ್ಳಲು ನೆರವಾಗುವ ಜಾಲ-ಆಧರಿತವಾದ ಸಂಪರ್ಕಸಾಧನ.

  • Red Hat Enterprise Linux ಉತ್ಪನ್ನ ಪುಟ

    Red Hat Enterprise Linux ಉತ್ಪನ್ನದ ನೀಡಿಕೆಗಳಿಗೆ ಒಂದು ಪ್ರವೇಶ ದ್ವಾರವನ್ನು ಒದಗಿಸುತ್ತದೆ.